ಕ್ರಿ.ಶ. 1960 ರ ದಶಕದಲ್ಲಿ ಪರಸ್ಥಳದಿಂದ ವಿದ್ಯಾರ್ಜನೆಗಾಗಿ ಬೆಂಗಳೂರಿಗೆ ಬಂದ ಕೆಲವೇ ವಿದ್ಯಾರ್ಥಿಗಳಿಂದ ಉಗಮವಾದ ಸಂಸ್ಥೆಯೇ ಶ್ರೀಶಾರದಾನಿಕೇತನ ಅಸೋಸಿಯೇಷನ್, ಬೆಂಗಳೂರು. ಪರಸ್ಥಳಗಳಿಂದ ಬಂದ ವಿದ್ಯಾರ್ಥಿಗಳಿಗೆ ಆಹಾರ, ವಸತಿ ಮುಂತಾದ ಅಗತ್ಯಗಳಿಗೆ ಸಾಕಷ್ಟು ಸೌಲಭ್ಯವು ಇರದಿದ್ದ ಆ ಸಮಯದಲ್ಲಿ ಆರಂಭವಾದ ಈ ಸಂಸ್ಥೆ ಕೆಲವು ಮಹನೀಯರ ಪರಮಪರಿಶ್ರಮದಿಂದ ಹಂತಹಂತವಾಗಿ ಮೇಲೇರುತ್ತಾ 1972 ನೇ ಇಸವಿಯಲ್ಲಿ Society Registration Act 1960 (Mysore Act No. 17 of 1960). (R.C. No. 112/72-73 Dt. 21-07-1972). ಕಾಯಿದೆಯಡಿ ನೋಂದಾಯಿಸಲ್ಪಟ್ಟಿತು. ಇದಕ್ಕೆಲ್ಲ ಮುಖ್ಯವಾಗಿ ಕಾರಣೀಭೂತರಾದ ಮಹನೀಯರೆಂದರೆ ಅಂದಿನ ಖ್ಯಾತ ಉದ್ಯಮಿಯಾಗಿದ್ದ ಶ್ರೀ ಡಿ. ಕೃಷ್ಣಮೂರ್ತಿಗಳು, ರಾಜಕೀಯ ಸಾಮಾಜಿಕ ಬೃಹತ್ ಸಭೆ, ವಸ್ತುಪ್ರದರ್ಶನ ಮುಂತಾದ ಸಮಾರಂಭಗಳಿಗೆ ತಾತ್ಕಾಲಿಕ ವಿದ್ಯುದ್ದೀಪಾಲಂಕಾರ ವ್ಯವಸ್ಥೆಯನ್ನು ಕಲ್ಪಿಸುವುದರಲ್ಲಿ ಅಗ್ರಮಾನ್ಯರಾಗಿದ್ದ ಶ್ರೀ ಎಮ್.ಎನ್. ವೆಂಕಟಸುಬ್ಬಯ್ಯನವರು, ಉದ್ಯಮಿಗಳಾಗಿದ್ದ ಶ್ರೀ ವಿ.ಕೆ. ರಾಮಣ್ಣನವರು, ಪ್ರಮುಖ ನ್ಯಾಯವಾದಿಗಳಾಗಿದ್ದ ಶ್ರೀ ಎಮ್. ಎಸ್. ಪುರುಷೋತ್ತಮರಾವ್, ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನಲ್ಲಿ ಸಸ್ಯಶಾಸ್ತçಪ್ರಾಧ್ಯಾಪಕರಾಗಿದ್ದ ಪ್ರೊ|| ಎಲ್. ನಾರಾಯಣರಾಯರು, ಖ್ಯಾತ ಇಂಜಿನಿಯರ್ ಗಳಾದ ಶ್ರೀ ಪಿ.ವಿ. ವೆಂಕಟಸುಬ್ಬಯ್ಯ, ಡಾ|| ಸಿ.ಎಸ್. ವಿಶ್ವನಾಥ್ ಮುಂತಾದವರು. ಇವರೆಲ್ಲರೂ ಈಗ ಕೀರ್ತಿಶೇಷರಾಗಿದ್ದು, ತಮ್ಮಲ್ಲಿದ್ದ ಸದುದ್ದೇಶ, ಕಾರ್ಯಸಾಧನೆಯ ಛಲ, ಪ್ರಾಮಾಣಿಕತೆ ಇವುಗಳನ್ನು ಬಿಟ್ಟುಕೊಟ್ಟು ನಮ್ಮೆಲ್ಲರಿಗೆ ಈಗಲೂ ಮಾರ್ಗದರ್ಶಕರಾಗಿದ್ದಾರೆ. ನಮ್ಮ ಸಂಸ್ಥೆಯ ಆಧಾರ ಸ್ತಂಭಗಳಲ್ಲಿ ಮಧ್ಯಸ್ಥಾನೀಯರಾಗಿದ್ದ ಶ್ರೀ ವಿ.ಕೆ. ರಾಮಣ್ಣನವರು ಈ ಜಾಲತಾಣವು ಆರಂಭವಾಗುವುದಕ್ಕೆ ಕೆಲವೇ ದಿನಗಳ ಹಿಂದೆ ಅಂದರೆ ದಿನಾಂಕ 01-07-2025 ರಂದು ವಿಧಿವಶರಾಗಿರುತ್ತಾರೆ. ಈ ಎಲ್ಲ ಮಹಾನ್ ಚೇತನಗಳ ಸಂಕಲ್ಪಶಕ್ತಿಯ ಫಲವೇ ಈಗ ಭವ್ಯವಾಗಿ ನಮ್ಮೆದುರಿಗಿರುವ ಸಂಸ್ಥೆಯ ಸ್ವಂತ ಕಟ್ಟಡ.
ಈ ಶ್ರೀಶಾರದಾನಿಕೇತನ ಅಸೋಸಿಯೇಷನ್ (ನೋಂ) ಸಂಸ್ಥೆಯನ್ನು ಪ್ರತಿನಿಧಿಸಿ, ಇದರ ಧ್ಯೇಯೋದ್ದೇಶಗಳನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವುದಕ್ಕಾಗಿಯೇ ಈ ಕೆಳಕಂಡ ಕಾರ್ಯಕಾರಿಸಮಿತಿಯ ಸದಸ್ಯರು ಸಹಕಾರ ಇಲಾಖೆಯ ಆಡಳಿತಾಧಿಕಾರಿಗಳಿಂದ ಚುನಾಯಿಸಲ್ಪಟ್ಟಿರುತ್ತಾರೆ.
ಅಧ್ಯಕ್ಷರು
ಉಪಾಧ್ಯಕ್ಷರು
ಕಾರ್ಯದರ್ಶೀ
ಸಹಕಾರ್ಯದರ್ಶೀ
ಖಜಾಂಚಿ
ಶ್ರೀ ಎ. ರಘುಪತಿ
ಶ್ರೀ ಎನ್. ಹರೀಶ್ ಕುಮಾರ್
ಶ್ರೀ ಗೋವಿಂದರಾಜ್
ಶ್ರೀ ಎಚ್.ಎ. ಶ್ರೀನಿವಾಸನ್
ಶ್ರೀ ವಿ. ನಾಗೇಂದ್ರ
ವಿ.ಕೆ. ರಾಮಣ್ಣ (ವಿಧಿವಶರಾಗಿದ್ದಾರೆ)
ಶ್ರೀ ಜಿ. ಆನಂದರಾಮನ್
ಶ್ರೀ ಕೆ.ಸಿ. ರಮೇಶ್
ಶ್ರೀಮತಿ ಬಿ.ಎಸ್. ಗೀತಾ
ಶ್ರೀಮತಿ ನಾಗಮಣಿ ವಿ. ರಾವ್